ಪ್ರೀತಿಯ ರವಿ ಸರ್ ,ನನ್ನ ಎಲ್ಲಾ ಶಿಕ್ಷಕ ಬಳಗವೇ, ನಮ್ಮ ವೃತ್ತಿ ಜೀವನದಲ್ಲಿ ಪ್ರತಿ ದಿನವೂ ಹೊಸದನ್ನುಕಲಿಯುತ್ತಿರುತ್ತೇವೆ.
ಬಹು ಮುಖ್ಯವಾಗಿ ನಮ್ಮ ತರಗತಿ ಕೋಣೆಯೊಳಗಿನ,ಶಾಲೆಯೊಳಗಿನ, ಸ್ಟಾಪ್ ರೂಮ್ ಅನುಭವಗಳು ಹೀಗೆ ಎಲ್ಲವೂ ನಮ್ಮ ವೃತ್ತಿ ಜೀವನದಲ್ಲಿನ ಮರೆಯಲಾಗದ ಅನುಭವಗಳುಎಂದೇ ಹೇಳಬಹುದು.ಇಲ್ಲಿಯವರೆಗೆ 06 ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ.ಪ್ರತಿ ಶಾಲೆ,ತರಗತಿ ಕೋಣೆಗಳು ,ಮುಖ್ಯಶಿಕ್ಷಕರು,ಸಹಶಿಕ್ಷಕರು ,ಪ್ರದೇಶ ಎಲ್ಲವೂ ಭಿನ್ನ,ಭಿನ್ನ.ಅದರಲ್ಲೂ ಪ್ರಮುಖವಾಗಿ ಈಗ ಸೇವೆ ಸಲ್ಲಿಸುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿಗಳು,ಸಹಶಿಕ್ಷಕರು ಎಲ್ಲವೂ ಸಹ ಸವಾಲು&ಹೊಸದನ್ನು ಕಲಿಯಲು ನನ್ನನ್ನು ಪ್ರೇರೇಪಿಸುತ್ತಿವೆ ಎಂದರೆ ತಪ್ಪಾಗಲಾರದು.ಪ್ರತಿ ಸವಾಲುಗಳಿಗೂ ನನ್ನದೇ ಆದ ರೀತಿಯ ಪರಿಹಾರ ಕಂಡುಕೊಳ್ಳುತ್ತಿದ್ದೇನೆ.ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಹೊಸ,ಹೊಸ ಆಕರ್ಷಕ ಚಟುವಟಿಕೆ ಆಧಾರಿತ ಬೋಧನಾ ವಿಧಾನ ರೂಪಿಸಿಕೊಳ್ಳುತ್ತಿದ್ದೇನೆ.ಪ್ರತಿ ಸಲವೂ ಹೊಸ ಅನುಭವ. ಅನುಭವವೇ ಶ್ರೇಷ್ಠ ಶಿಕ್ಷಕ ಎಂದು ಭಾವಿಸಿದ್ದೇನೆ.ನಮಗೆ ನಾವೇ ಮಾದರಿ
2 comments:
yes sir
nice sir
Post a Comment